ಕಾಗುಣಿತ ತಪ್ಪಾಯ್ತು ಅಂತ ನೂರುಸಾರಿ ಅದನ್ನೇ ಬರೆಸಿ ಅಕ್ಷರ ದುಂಡಾಗುವಂತೆ ಮಾಡಿದ
#ಕನ್ನಡ ಮೇಷ್ಟ್ರಿಗೆ
ಹೊಟ್ಟೆಪಾಡಿಗೆ ಇಂಗ್ಲಿಷ್ ಇದ್ದರೂ ಮಾತೃಭಾಷೆ ಮುಖ್ಯ ಎಂದು ಹೇಳಿಕೊಟ್ಟ
#English ಮೇಷ್ಟ್ರಿಗೆ
ಕಳೆದದ್ದಕ್ಕೆ ಕೊರಗಬೇಡ ಗಳಿಸುವಾಗ ಮೆರೆಯಬೇಡ ಎಂದು ಹಿತವಚನ ಹೇಳಿದ
#ಗಣಿತ ಮೇಷ್ಟ್ರಿಗೆ
ಇತಿಹಾಸ ಮರೆತವನು ..ಇತಿಹಾಸ ಸೃಷ್ಟಿಸಲಾರ ಕಣಯ್ಯಾ ಎಂದು ತಿಳುವಳಿಕೆ ನೀಡಿದ
#Social ವಿಜ್ಞಾನ ಮೇಷ್ಟ್ರಿಗೆ
ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು .ಇದು ಗುರುತ್ವಾಕರ್ಷಣೆ ಮಾತ್ರವಲ್ಲ . ಜೀವನದ ನಿಯಮ ಎಂದು ಹೇಳಿದ
#Science ಮೇಷ್ಟ್ರಿಗೆ
ತಪ್ಪು ಮಾಡಿದಾಗ ಬಸ್ಕಿ ಹೊಡೆಸಿ ದೇಹ ಗಟ್ಟಿ ಮಾಡಿದ
#ಪಿಟಿಮೇಷ್ಟ್ರಿಗೆ